ಸ್ವಾಗತ
ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ!
ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ, ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.
ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ.
ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,
ಪ್ರದೀಪ್
ಚೆನ್ನಾಗಿದೆ ಲೇಖನ. ಪುರಾಣೇತಿಹಾಸ ತಿಳಿದು ಚಾ-ಕಾಫಿ ಪ್ರಿಯರಿಗೆ ಸ್ವಲ್ಪ ಭಕ್ತಿ ಹೆಚ್ಚಾಗಿರಬಹುದು! ಎಷ್ಟೇ ಪೂಜೆ, ಉಪವಾಸ ಬೇಕಾದರೂ ಮಾಡ್ತೀವಿ ಚಾ-ಕಾಫಿ ಬಿಡೋಕ್ಕಾಗಲ್ಲ ಎನ್ನುವ ನಮ್ಮಮ್ಮನಂತಹ ಭಕ್ತ ಜನರಿಗೆ, ಈ ಪುರಾಣ ತಿಳಿದು ಅಮೃತ (strong coffee) ಕುಡಿದಷ್ಟೇ ಸಂತೋಷವಾಗಬಹುದು!
ReplyDeleteಈ ಪುರಾಣ ತಿಳಿದು ಕೆಲವು ವಿಷಯಗಳೆಲ್ಲಾ ಮತ್ತಷ್ಟು ಸ್ಪಷ್ಟವಾಗಿದೆ
ಶಂಕರಾಚಾರ್ಯರು ತಮ್ಮ "ಭಜ ಗೋವಿಂದಂ" ಸ್ತೋತ್ರದಲ್ಲಿ ಒಂದೆಡೆ "ಭಗವದ್ಗೀತಾ ಕಿಂಚಿತ ಧೀತಾ ಗಂಗಾ ಜಲಲವ ಕಣಿ 'ಕಾಪೀ' ತಾ.. " ಅಂತ ಹೇಳಿದ್ದನ್ನು ನಾನು ಇಷ್ಟು ದಿನ ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ
"ಚೇಟೀ ಭವನ್ನಿಖಿಲ ಕೇಟೀ ಕದಂಬ ವನವಾಟೀ ಶುನಾಕಪಟಲಿ
ಕೋಟೀರಚರುತರ ಕೋಟೀಮಣಿ ಕಿರಣ ಕೋಟೀಕರಮ್ಜಿತ ಪದಾ.."
ಎಂದು ಮೊದಲಾಗುವ ಶ್ಲೋಕವನ್ನು ಕಾಳಿಕಾ ದೇವಿ ಪ್ರತ್ಯಕ್ಷವಾದಾಗ ಕಾಳಿದಾಸ ಬರೆದನೆಂದು ಪ್ರತೀತಿ. (ಇದನ್ನು ಆಲಿಸಬೇಕೆಂದು ಇಚ್ಚಿಸುವವರು ಈ ಕೊಂಡಿಯನ್ನು ಕ್ಲಿಕ್ಕಿಸಿ - http://www.raaga.com/play/?id=39246 )
ಅಲ್ಲಿಯವರೆಗೂ ಕೇವಲ ಅಜ್ಞಾನಿ ಕುರುಬನಾಗಿದ್ದವನಿಗೆ ಇಷ್ಟೊಂದು ಸ್ಫೂರ್ತಿ ಹೇಗೆ ಬಂತು ಎಂಬ ಸಂದೇಹ ಈಗ ನಿವಾರಣೆ ಆಯ್ತು. ಅವನು ಟೀ ಕುಡಿದು ಇದನ್ನು ರಚಿಸಿದ ಅಂತ ಅನ್ಸುತ್ತೆ, ಶ್ಲೋಕದಲ್ಲಿ ಅದರ ಬಗ್ಗೆ clue ಕೊಟ್ಟಿದ್ದಾನೆ.
ಅಷ್ಟೇ ಅಲ್ಲದೆ ನಾನು ಚಿಕ್ಕಂದಿನಿಂದ ನೋಡಿರುವ ಹಾಗೆ ಹಾಲು ಮಾರುವವನು "ಆಕಾಶಾತ್ ಪತಿತಂ ತೋಯಂ.. ಯಥಾ ಗಚ್ಚತಿ "ಚಾ" ಗರಂ" ಎಂದೇ ಭಕ್ತಿಯಿಂದ ನೀರು ಸೇರಿಸುತ್ತಿದ್ದ ಎಂದು ನನಗನ್ನಿಸುತ್ತದೆ.
ಈ ಹೊಸ ಜ್ಞಾನ ಪ್ರಭಾವದಿಂದ ನಮ್ಮ ಧಾರ್ಮಿಕ ವಿಧಿಗಳಲ್ಲಿ ಕೆಲವು ಬದಲಾವಣೆಗಳನ್ನು ತರಬಹುದು ಎಂದು ನನಗನ್ನಿಸುತ್ತದೆ. ಇದರ ಪ್ರಯೋಜನಗಳನ್ನು ನೋಡಿ ಪ್ರಾಜ್ಞರು ಖಂಡಿತ ಇದನ್ನು ಒಪ್ಪುತ್ತಾರೆಂದು ನನ್ನ ಇಂಗಿತ.
ಸಂಜೀವನಿ, ಅಮೃತ ಪ್ರಾಯವಾದ ಈ ಪಾನೀಯಗಳನ್ನು ಪೂಜೆ ಸಮಯದಲ್ಲಿ ನೈವೇದ್ಯಕ್ಕಾಗಿ ಪಾಯಸ ಅಥವಾ ಪಾನಕಗಳಿಗೆ ಬದಲಾಗಿ ಉಪಯೋಗಿಸಬಹುದು. ಗೃಹಿಣಿಯರಿಗೆ ಇದರಿಂದ ಅನುಕೂಲವಾಗುತ್ತೆ.
ಸಂಧ್ಯಾವಂದನೆ ಅಥವಾ ಆಚಮನಕ್ಕೆ ಈ ಪಾನೀಯಗಳನ್ನು ಬಳಸುವದರಿಂದ, ಚಾ-ಕಾಫಿ ಕುಡಿಯುವುದನ್ನು ಹಾಗು ಸಂಧ್ಯಾವಂದನೆಯನ್ನು ಒಟ್ಟಿಗೆ ಮಾಡಬಹುದು. ಇದರಿಂದ ಹಲವು ಪ್ರಯೋಜನಗಳಿವೆ - ಸಮಯ ನಷ್ಟವಿಲ್ಲ, ನೀರು ವ್ಯರ್ಥವಿಲ್ಲ, ಹೊಸ ಪೂಜಾ ಅನುಕೂಲ ಕಂಡು ಜನರಲ್ಲಿ ಹೆಚ್ಚಿನ ಧಾರ್ಮಿಕ ಶ್ರದ್ದೆ ಬೆಳೆದು ಬರೇ ಬೆಳಗ್ಗೆ ಏನು.. ಮೂರು ಹೊತ್ತು ಮಾಡುವ ಸಾಧ್ಯತೆ ಉಂಟು
ಕುಂಕುಮಕ್ಕಾಗಿ ಮುತ್ತೈದೆಯರನ್ನು ಕರೆಯುವ ಜೊತೆಗೆ ಪತಿ ಮಹಾಶಯರನ್ನು ಚಾ-ಕಾಫಿಗೆ ಕರೆಯುವುದರಿಂದ ಹೆಂಗಸರ ಪಕ್ಷಪಾತ ಸಂಪ್ರದಾಯ (male discrimination) ಸುಧಾರಿಸಿ, ಪುರುಷ-ಸ್ತ್ರೀ ಸಮಾನತಗೆ ಧಾರ್ಮಿಕವಾಗಿ ಅವಕಾಶವಿರುತ್ತೆ
ಟೀ ಟೈಮ್ ಆಯಿತು.. ಮತ್ತೆ ಸಿಗೋಣ
ಪ್ರದೀಪ್
ಈ ಕಥೆಗಳನ್ನು ಓದಿ ತಡೆಯಲಾಗದೆ ಕೂಡಲೇ YUBAN ಕಾಫಿ ಮಾಡಿಕೊಂದು ಕುಡಿಯುತ್ತ ಈ ತಂತಿ ಪತ್ರವನ್ನು ಬರೆಯಲು ಶುರುಮಾಡಿದೆ. ಇಗೊಂದೆರಡು ದಶಕಗಳ ಹಿಂದೆ ಪ್ರತಿ ಬೆಳಿಗ್ಗೆ, ಅದರಲ್ಲೂ ಮಾಗಿ ಮಾಸದಲ್ಲಿ, ವಿದ್ಯಾರ್ಥಿ ಭವನ ಅಥವಾ ಮಾವಳ್ಳಿ ಸರ್ಕಲ್ ಗಳಿಂದ ಒಂದು ಮೈಲಿ ದೂರದಲ್ಲಿ ಹೋಗುತ್ತಿದ್ದರೂ ನನ್ನ ವೆಸ್ಪ ದ್ವಿಚಕ್ರ ವಾಹನ ತನ್ನಿಂದ ತಾನೇ ಆ ಉಪಾಹಾರ ಗೃಹಗಳ ಮುಂದೆ ಹೋಗಿ ನಿಲ್ಲುತ್ತಿತ್ತು. ಆಗ ತಾನೆ ಪುಡಿ ಮಾಡಿದ ಫಿಲ್ಟರ್ ಕಾಫಿ ಕುಡಿಯದೆ ಮುಂದೆ ಕದಲುವುದಿರಲಿ ಸ್ಟಾರ್ಟ್ ಆಗ್ತಾನೆ ಇರಲಿಲ್ಲ. ಇದಕ್ಕೆಲ್ಲಾ ಕಾರಣ ದೇವ ದಾನವರ ಅಮೃತ ಮಥನ ಅಂತಹ ತಿಳಿದ ಮೇಲಂತೂ ವೆಸ್ಪದ remote ಕಂಟ್ರೋಲ್ ಬಗ್ಗೆ ಇನ್ನೂ ಭಕ್ತಿ ಭಾವ ಉಕ್ಕಿ ಬರ್ತಾ ಇದೆ.
ReplyDeleteಪುನೀತ್ ಪೆಪ್ಸಿ ಕೋಲದ ಬಗ್ಗೆ ಸಂಶೋಧನೆ ಮಾಡ್ತಾ ಇರೋದು ಶ್ಲಾಘನೀಯ ಸಂಗತಿ. ಇಂದ್ರರ ಮುಂದಾಳತ್ವದಲ್ಲಿ ನಡೆಯುತ್ತಿರುವ ಆ ಕಂಪನಿಗೂ ಪುರಾಣಗಳಿಗೂ ಎಲ್ಲೋ ಸಂಬಂಧ ಇರುವುದು ಸಾಧ್ಯ. ಮೈಸೂರು ರಸ್ತೆಯ RV ಫಾಲ್ಲ್ಸ್ನೀನ ನೀರನ್ನು ಸೆಳೆದರೂ ಅಂತಹ ಸ್ವಾದನೀಯ ಪಾನಿಯವನ್ನು ಮಾಡುತ್ತಿರುವ ಪೆಪ್ಸಿ ಫ್ಯಾಕ್ಟರಿಯನ್ನು ನೋಡಿದಾಗಲೇ ಹಾಗೆನಿಸಿತ್ತು.
ಅಂದ ಹಾಗೆ ನನ್ನ ಬೆಂಗಳೂರಿನ ಸ್ನೇಹಿತನೊಬ್ಬ ಇತ್ತೀಚಿಗೆ ತಾನೇ, ಮಾನವರೆನ್ನೆಲ್ಲಾ ಮರುಳು ಮಾಡಿರುವ ವಿಜಯ ಮಲ್ಯ ಹನ್ನೊಂದನೇ ಅವತಾರವೇ ಯಾಕಾಗಿರಬಾರದು ಎಂದು ಪ್ರಶ್ನಿಸಿ ಬೆಂಗಳೂರಿನ ಸುತ್ತು ಮುತ್ತಲಿನ ವಿದ್ಯಾರ್ಥಿ ಬಳಗದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದಾನೆ. ಮೊದಲನೆಯದು ಮತ್ಸ್ಯ ಹಾಗಾಗಿ ಹನ್ನೊಂದನೆಯದು ಮಲ್ಯ ಅಂತ ಅವನ ವಾದ. ತಿಳಿದವರು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳ ಬಹುದೆಂದು ಅವನ ಅರಿಕೆ.
ನಮಸ್ಕಾರ
ಪ್ರಸಾದ್ ಸಾಮಕ