ಎಲ್ಲರಿಗು ಸಂಕ್ರಾಂತಿಯ ಶುಭಾಶಯಗಳು.
ಪ್ರದೀಪನ 'ಸಂ' ಕ್ರಾಂತಿ ಬಹಳ ಚೆನ್ನಾಗಿದೆ.
ಸ್ಪೂರ್ತಿಯಿಂದ ನನ್ನದೊಂದು ಪ್ರಾರ್ಥನೆ!.
++++++++++++++++++++++
ಬೆಳಗಾಯಿತೇಳಣ್ಣ ವೆಂಕಟರಮಣ
ಇಗೊ ಮತ್ತೆ ಬಂದಿದೆ ಮಕರ ಸಂಕ್ರಮಣ
ತಲೆಕೆಟ್ಟು ಸೂರ್ಯ ದಿಕ್ಕು ಬದಲಿಸಿ ದನಂತೆ
ಮತ್ತದೇ ಊರ್ದ್ವ ಗಮನ ಅದೇ ಉತ್ತರಾ ಯಣ.
ಪಾಪ ಅವನೇನು ಮಾಡುವನು ಸಕಲ ಗ್ರಹ ಬಲ ನೀನು
ಗ್ರಹಗಳಿಗೂ ಗ್ರಹಚಾರ ಕೊಡುವವನು ನೀನು
ಸೂರ್ಯನಿಗೆ ಮೀಸ್ಸಲ್ಲ ನಿನ್ನ ಈ ಪುಂಡಾಟ
ಭೂಮಿಗೂ ತಂದೆ ಸುಗ್ಗಿ ಹುಗ್ಗಿಯ ಕೂಟ
ಎಳ್ಳಿಗೂ ಬೆಲ್ಲಕೂ ಕೊಬ್ಬರಿಯ ಸಾಂ ಕರ್ಯ
ಚಪ್ಪರಿಸೋ ಬಾಯಿಗೆ ರುಚಿಯ ಕೈಂಕರ್ಯ
ಬರಿದೆ ಬದುಕಿರುವವರಿಗಲ್ಲ ಈ ಸಂಕ್ರಮಣ ಉತ್ಕ್ರಮಣ
ಸತ್ತವರಿಗೂ ಉಂಟು ಸಾಂತ್ವನ ತಿಲ ತರ್ಪಣ
ಭಾರತೀಯನು ನಾನು ವಿಶ್ವಮಾನವನು
ವಲಸಿಗನು ನಾನು ಉರಿಜೊನದವನು
ಬೆಂಬಿಡದ ಬೇತಾಳ ಹಿಂಬಾಲಿಸಿದೆ ನೀನು
ಕೂಡಿಸಿದೆ ಸ್ನೇಹಿಗಳ ಮಾಡಿಸಿದೆ ಸ್ಮರಣೆಗಳ
ವಿಸ್ಮರಣ ಶೀಲನಿಗೆ ಸ್ಮರಣ ಶಕ್ತಿ
ಸ್ಮರಣೆಯ ಮಿತ್ರರಿಂ ಸ್ಫೂರ್ತಿ ಶಕ್ತಿ
ಬೆಳೆಸು ಬಳಗದ ಶಕ್ತಿ ಬೆಳಗು ಬಳಗದ ಯುಕ್ತಿ
ಪಡುವಣದಿ ಮೂಡಿಸೋ ಕನ್ನಡದ ಭಕ್ತಿ
ಅಡಿಗಡಿಗೆ ಇರಲಣ್ಣ ಈ ನಿನ್ನ ಕರುಣಾ
ಮರೆಯದೆ ನಡೆಸಣ್ಣ ಟೆಂಪಿ ವೆಂಕಟಕೃಷ್ಣ
ಬೆಳಗಾಯಿತೇಳಣ್ಣ ವೆಂಕಟರಮಣ
ಇಗೊ ಮತ್ತೆ ಬಂದಿದೆ ಮಕರ ಸಂಕ್ರಮಣ
-ಪವಮಾನ
samtOSha samtOSha!
ReplyDeletesuriyutirali kaavyadhaareya varSha
sPoortiyaagide ellarigoo ee saMkraaMti
aaglai smaraNeyu AZkannDigarige mElpaMkti
haardika shubhaashayagaloMdige,
Vidya Gadagkar
Namaskara Pavamana & Smarane friends.
ReplyDeleteI am extremely happy reading dear pavamanara kavana !!!
kaavyadhaare yeshtu sphutavaagi nirargalavaagi hommide !
nimmalli hudugidda ee mahapratibhe heege vanasumavaagi uliyade
samasta kannadigara manassige aagaaga aahlada needali !!
Smarane nimmantaha hattu halavaaru supta chetanagalige sphoorti needali
intaha kavanagalige chaalane needida pradep, vidya avarige namma namana !
abhimaanadinda
prakash mattu radha