ಸ್ವಾಗತ

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ!

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ, ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ.

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,

ಪ್ರದೀಪ್

Sunday, January 29, 2012

ಸುಮ್ನೆ ತಲೆ ತಿನ್ನೋಕೆ...

೧.  ಈಗ ಅಸ್ತಿತ್ವದಲ್ಲಿ ಇಲ್ಲದಿರುವ ಬೆಂಗಳೂರಿನ ಈ ಥಿಯೇಟರಗಳು, ಜನ ಸಾಮಾನ್ಯರ ದೃಷ್ಟಿಯಲ್ಲಿ ಇನ್ನೂ ಕಣ್ಮರೆಯಾಗಿಲ್ಲ. ಬಸ್ ನಿಲ್ದಾಣ ಅಥವಾ ವಿಳಾಸ ತಿಳಿಸಲು ಇಂದಿಗೂ ಹೆಸರಿಸಲ್ಪಡುವ ಬೆಂಗಳೂರಿನ ಈ ಥಿಯೇಟರಗಳನ್ನು ಹೆಸರಿಸಿ.
೨. "ಹೊಂಬಿಸಿಲು" ಚಲನಚಿತ್ರದ ಹಾಡಿನ ಹೊರತಾಗಿ, "ಹೊಂಬಿಸಿಲು" ಪದ ಇರುವ ಕನ್ನಡ ಚಿತ್ರ ಗೀತೆ (ಗಳು)ಯನ್ನು ಹೆಸರಿಸಿ
೩. ಗ್ರೀಕ್ ಗೂ, ಕರ್ನಾಟಕಕ್ಕೂ ಸಂಬಂಧ ತಳಕು ಹಾಕಿರುವ ಗ್ರೀಕ್ ನಾಟಕ ಯಾವುದು? ಸಂಬಂಧದ ವಿಶೇಷತೆಯನ್ನು ತಿಳಿಸಿ.
೪. ಕುವೆಂಪು ಮೊದಲು ಬರೆದದ್ದೆಲ್ಲಾ ಇಂಗ್ಲೀಷ್-ನಲ್ಲಿ. ಅವರಿಗೆ ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದ್ದು ಯಾರು?
೫. ಯೆಂಡ, ಯೆಡ್ತಿ ಹೋದ್ರೂ ಕನ್ನಡ ಬಿಡಂಗಿಲ್ಲ ಅಂದ ರತ್ನನ ಹೆಂಡ್ತಿ ಯಾರು?
೬. ಗೆಳತಿಯ ಗಂಡನನ್ನು ಮೂದಲಿಸುವ ಇಬ್ಬರು ಹೆಂಗಸರ ವಾದವೇ ಪುರಂದರ ದಾಸರ ಈ ಕೀರ್ತನೆ. ಪಾಪ! ವಿಷ್ಣು ಮತ್ತು ಶಿವ - ಆ ಗಂಡದಿರು. ಯಾವುದೀ ಕೀರ್ತನೆ? 
೭. ಒಗಟುಗಳು 
     ಅ. ಅಂಗಿ ಬಿಚ್ಚಿ ಬಾವಿಗೆ ಹಾರು
     ಆ. ನೀರಲ್ಲಿ ಹುಟ್ಟಿ ನೀರಲ್ಲಿ ಕರಗುವೆನು. ನಾನ್ಯಾರು?
೮. ಬೆಂಗಳೂರಿನ ಮೊದಲ ಮಹಿಳಾ ಪೋಲಿಸ್ ಸ್ಟೇಷನ್ ಆರಂಭವಾದದ್ದು ಎಲ್ಲಿ?
೯. ಬೆಂಗಳೂರು ರೇಡಿಯೋ ನವರು ಮಾತಿಗೊಮ್ಮೆ "ಸಕ್ಕತ್ ಹಾಟ್ ಮಗಾ" ಅಂತಾರೆ ಯಾಕೆ?
೧೦. ಜನಪ್ರಿಯ ಸಂಗೀತ ನಿರ್ದೇಶಕ "ಹಂಸಲೇಖ" ಅವರ ನಿಜ ಹೆಸರು ಏನು?

12 comments:

  1. ಒಳ್ಳೆಯ ರಸಪ್ರಶ್ನೆಗಳಿಗೆ ಧನ್ಯವಾದ ಪ್ರದೀಪ್ ! ನೀವು ಸುಮ್ನೆ ತಲೆ ತಿನ್ನಲಿಲ್ಲ - ಮಿದುಳಿಗೇ ಕೈ ಹಾಕಿಬಿಟ್ರಿ :)

    ೧. ಸೆಂಟ್ರಲ್, ನಂದ, ಹಿಮಾಲಯ :), ಕಿನೋ, ಪುಟ್ಟಣ್ಣ.
    ೨. ಹಾಲುಂಡ ತವರು ಚಿತ್ರದಲ್ಲಿ ಬರುವ - "ಎಲೆ ಹೊಂಬಿಸಿಲೇ" ಗೀತೆ (ಸಾಹಸಸಿಂಹ ವಿಷ್ಣುವರ್ಧನ್)
    ೩.
    ೪. ಬಿ ಎಂ ಶ್ರೀ
    ೫. ಜಿ ಪಿ ರಾಜರತ್ನಂ ಅವರ ಶ್ರೀಮತಿಯವರು ....ಹೆಸರು ಗೊತ್ತಿಲ್ಲ ಸ್ವಾಮಿ :(
    ೬.
    ೭. ಬಾಳೆಹಣ್ಣು ಬಾಯಲ್ಲಿ ಹಾಕೊಳೋದು ; ನೀರು-ಗುಳ್ಳೆ
    ೮. ಹಲಸೂರು-ಗೇಟ್
    ೯. ಚಿತ್ರಗೀತೆ ತುಂಬಾ ಚೆನ್ನಾಗಿದೆ ಅನ್ನೋಕೆ (ಅಥವಾ ಚಿತ್ರನಟಿ ಚೆನ್ನಾಗಿದ್ದಾಳೆ ಅನ್ನೋಕೆ?...ಅಥವಾ ಬೆಂಗಳೂರಿನ ಹವೆ/ಸೆಕೆ ಜಾಸ್ತಿ ಅನ್ನೋಕೆ)
    ೧೦.

    ReplyDelete
  2. ಪುನೀತ್,

    ನಿಮ್ಮ ಪ್ರಯತ್ನ ಬಹಳ ಚೆನ್ನಾಗಿದೆ.

    ೧. ಇನ್ನಷ್ಟು ಇವೆ
    ೨. ಇನ್ನೂಗೊತ್ತೇ?
    ೪. ಉತ್ತರ ಸರಿ ಇಲ್ಲ
    ೫. ದಾರಿ ತಪ್ಪಿದ ಹಾಗಿದೆ
    ೭. ಅ. ಸರಿಯಿದೆ.. ಬಾಳೆ ಹಣ್ಣು ಬಾಯಿಗೆ ಹಾಕ್ಕೊಳ್ಳಿ :-)
    ಬ. ನೀರು-ಗುಳ್ಳೆ ಅಲ್ಲದೆ ಸರಿಯಾದ ಉತ್ತರ ಇನ್ನೊಂದಿದೆ, ಪ್ರಯತ್ನಿಸಿ
    ೮ ಉತ್ತರ ಸರಿ
    ೯ ಪ್ರಶ್ನೆ ಅಷ್ಟು ಸರಿ ಇಲ್ಲದಿರಬಹುದು.. ಆದರೆ ಉತ್ತರ ಬೇರೆ

    ReplyDelete
  3. 1.Minerva,Paramount,Alankar,Swastik,Sharada,Naaz,New Opera,

    7. Uppu

    9. Janapriya
    10. Jayaraj

    Pravajo

    ReplyDelete
    Replies
    1. ೧. ಶಾಂತಿ, ಸುಜಾತಾ, ಗೆಲಾಕ್ಸಿ, ಲಿಡೋ, ಪ್ರಭಾತ್
      ೨. ಜ್ಞಾಪಕ ಆಗ್ತಾ ಇಲ್ಲ
      ೩. ಬಿ ಎಂ ಶ್ರೀ ಅವರ ಅಶ್ವತ್ಥಾಮನ್ ನಾಟಕ - ಗ್ರೀಕ್ ನಾಟಕ "Ajax by Sophocles " ಆಧಾರಿತ (ಗೂಗಲ್ ಇಂದ ಕದ್ದಿದ್ದು ....ನಂಗೆ ಇದು ಗೊತ್ಹ್ಹಿರಲಿಲ್ಲ!)

      ಒಂದು ಸರಿ ಗೂಗಲ್ ಮಾಡಿದ ಮೇಲೆ ನಿಲ್ಲಿಸಲೇ ಬೇಕು ಮರ್ಯಾದೆಯಾಗಿ..ಅಲ್ವೇ

      Delete
    2. ಜೋಶಿಯವರು ಯಾಕೋ ಬೇರೆ ಉತ್ತರಗಳಿಗಿಂತ ಹೆಚ್ಚಾಗಿ ಥಿಯೇಟರ್ ಗಳೇ ಹೆಚ್ಚಾಗಿ ಸೂಚಿಸಿದ್ದೀರಿ ಯೌವನ "ಸ್ಮರಣೆ" ಪ್ರಭಾವವೇ? :-)

      7 ಮಾತ್ರ ಸರಿ.. ನಂತರದ್ದು ತಪ್ಪಿವೆ.

      Delete
  4. ಪ್ರಸಾದ್ ರವರೆ,

    'ಬ್ರೌಸ್ ಮಾಡೋಕೆ ಕುಳಿತವನು, ಗೂಗಲ್ಗೆ ಹೋಗದೇ ಇರ್ತಾನಾ?' ಅನ್ನೋ ಗಾದೆ ಕೇಳಿಲ್ವೇ? :-)
    ನೀವು ಹೇಳಿರೋದು ನೋಡಿ, ಬೀಚಿ ಒಂದು ಕಡೆ ಬರೆದಿದ್ದು ಜ್ಞಾಪಕಕ್ಕೆ ಬರುತ್ತೆ

    "ಅಲ್ಲಿಷ್ಟು ಕದ್ದಿಹೆನು ಇಲ್ಲಿಷ್ಟು ಮೆದ್ದಿಹೆನು|
    ಬೆಲ್ಲವನು ನೊಣ ಸವಿಯೆ ಅದು ಕಳ್ಳತನವೇ?||
    ಎಲ್ಲರೂ ಕಳ್ಳರೆ, ಕವಿಗಳ ಸಾಲು ನಿಂತಿಹುದು|
    ಎಲ್ಲ ಜೇಬಲಿ ಕೈ, ಜೇಬು ಅವರದಲ್ಲ ಸಾಲಾಗಿ ನಮಿಸೋ ತಿಂಮ||"

    ಅದ್ದರಿಂದ ಎಲ್ಲರೂ ಕಳ್ಳರೆ! ಈ ರಸಪ್ರಶ್ನೆಯೂ ಅದರ ಫಲಿತವೇ!

    ಓ.. ಮರತೆ.. ಇನ್ನು ಸರಿಯಾದ ಉತ್ತರ ಕದ್ದಿಲ್ಲ ನೀವು.. ಮರಳಿ ಪ್ರಯತ್ನಿಸಿ

    ಪ್ರದೀಪ್

    ReplyDelete
  5. Pradeep,

    uttaragaLannu neeDi dhanyaraagi :)

    ReplyDelete
  6. ಉತ್ತರಗಳು:

    ೧. ಹೆಚ್ಚಿನ ಮಂದಿ ಇದಕ್ಕೆ ಉತ್ತರ ನೀಡಿದ್ದಿರಿ. ಮಿನರ್ವ, ಸ್ವಸ್ತಿಕ್, ಗೀತಾಂಜಲಿ,ಸೆಂಟ್ರಲ್, ನಂದ,ಪುಟ್ಟಣ್ಣ ಇತ್ಯಾದಿ
    ೨. ಕ್ಷಮಿಸಿ.. ಈಗ ನನಗೇ ಜ್ಞಾಪಕ ಬರ್ತಾ ಇಲ್ಲ. ಪುನೀತ್ ಉತ್ತರ ಒಪ್ಪಿಕೊಳ್ಳೋಣ
    ೩. ಇಲ್ಲಿನ ಕ್ಲೂ ಪದ - "ತಳಕು". Charition mime ಹೆಚ್ಚಿನ ವಿವರಗಳಿಗೆ ಈ ಕೊಂಡಿ ಕ್ಲಿಕ್ಕಿಸಿ
    http://en.wikipedia.org/wiki/Charition_mime

    ೪. James H Cousins, an Irish poet.
    http://www.kuvempu.com/en/lnt8.html

    ೫. ರತ್ನನ ಹೆಂಡ್ತಿ - ಪುಟ್ನಂಜಿ
    "ಯೇಳ್ಕೊಳ್ಳಾಕ್ ಒಂದ್ ಊರು. ತಲೇಮೇಗ್ ಒಂದ್ ಸೂರು. ಮಲಗಾಕೆ ಬೂಮ್ತಾಯಿ ಮಂಚ;. ಕೈ ಯಿಡದೋಳ್ ಪುಟ್ನಂಜಿ, ನೆಗನೆಗತ ಉಪ್ಗಂಜಿ. ಕೊಟ್ರಾಯ್ತು ರತ್ನನ್ ಪರ್ಪಂಚ!.. "

    ೬. ಲಕ್ಷ್ಮೀ ಮತ್ತು ಪಾರ್ವತಿಯರ ಸಂವಾದ ರೂಪದ ದಾಸರ ಹಾಡು
    "ತರಳೆ ರನ್ನೆ ಕಪ್ಪು ಮೈಯವ ಯಾತರ ಚಲುವನೆ.."
    http://www.forumhub.com/indcmusic/9213.04.52.27.html

    ೭. ಬಾಳೇಹಣ್ಣು, ಉಪ್ಪು

    ೮. ಹಲಸೂರು-ಗೇಟ್

    ೯. ರೇಡಿಯೋ ಮಿರ್ಚಿ 98.3 FM ಅವರ tagline - "ಸಕತ್ ಹಾಟ್ ಮಗಾ".. ಅದಕ್ಕೆ ಮಾತಿಗೊಮ್ಮೆ ಅದನ್ನು ಹೇಳ್ತಾರೆ

    http://kannada.oneindia.in/news/2008/01/22/radio-michi-tops-the-charts-bangalore.html

    ೧೦. ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು

    ಯಾಕೋ ರಸಪ್ರಶ್ನೆ ನಿಜಕ್ಕೂ ತಲೆ ತಿಂದ ಹಾಗಿದೆ.. ನಿರೀಕ್ಷೆಗಿಂತ ಕಮ್ಮಿ ಪ್ರತಿಕ್ರಿಯೆ ಬಂದಿದೆ.. ಪುನೀತ್ ಪ್ರಯತ್ನ ಚೆನ್ನಾಗಿದೆ..

    ಇದನ್ನು ಮುಂದುವರಿಸುವುದೇ.. ಬೇಡವೇ.. ತಿಳಿಸಿ

    ಪ್ರದೀಪ್

    ReplyDelete
  7. Namaskara Pradeep,
    Smarane-ya blog viLaasa gotthiralilla illivaregoo annalu sankocha vaagutthe :) It is really nice site with so much narration! I would request you please continue the Rasaprashne series :) and most importantly I will be very happy to see the Smarane become live again!!!!!!
    Thanks
    Manju

    ReplyDelete
  8. ನನಗೆ ಏನು ಬರೀಬೇಕೋ ಅಂತಾ ತಿಳೀತಿಲ್ಲ, ಧನ್ಯವಾದಗಳು.

    ReplyDelete
  9. ನನಗೆ ಏನು ಬರೀಬೇಕೋ ಅಂತಾ ತಿಳೀತಿಲ್ಲ, ಧನ್ಯವಾದಗಳು.

    ReplyDelete
  10. Las Vegas' Wynn Casino - JTM Hub
    Casino. 출장안마 Wynn is a $4 billion resort with four hotel towers with หารายได้เสริม 5,750 rooms and suites. casino-roll.com Each of the hotel towers includes 바카라 사이트 a worrione 20,000 square foot casino and a

    ReplyDelete